21 May 2007

ಕವನ ಪ್ರಸಂಗ-2



ನೂರು ನೆನಪುಗಳ ಆಗರ
ಈ ಕಂಗಳ ನೋಟ
ದೀಪದ ಸುತ್ತ-ಮುತ್ತ
ಬೆಳಕು-ಕತ್ತಲೆಯ ಮೈತ್ರಿ ಕೂಟ

ಕಂಡರೂ ಕಾಣದ
ನೋಡಿದರೂ ಹೇಳಲಾಗದ
ಅಪರೂಪದ ಸ್ಥಿತಿ
ಇರಲು ಈ ಸುಂದರ ಚಿತ್ರ
ಶಬ್ದಸಾಗರದಿ ತಿಳಿಯಾಗಬಹುದೇ
ಎನ್ನುವ ಭೀತಿ

ನೂತನ-ಚಿರನೂತನ
ಪ್ರತಿಯೊಂದು ನೋಟ
ಬಣ್ಣದ ಚಿತ್ತಾರಕ್ಕೆ
ಶಬ್ದದೀ ಹೊಸ ಮೈಮಾಟ!


2 comments:

Shree said...

AMAZED BY THE BEAUTY OF THIS PHOTO... Idu Mosa Rajeev!!! :)

ಅನಿಕೇತನ said...

ಕ್ಷಮೆಯಿರಲಿ ಶ್ರೀ !
ಚಿತ್ರಕವನಕ್ಕೆ ಯಾವತ್ತೂ ಮೋಸ ಇಲ್ಲಾ !