07 May 2007

ಅಲಾರಾಮ್ !

ದಿನವೂ ಅಲಾರಾಮ್ ಬಡಿದೇಳಿಸಲು
ಕರಾರುವಕ್ಕಾಗಿ ಇಡುವ ಸಮಯ 6.00 ಗಂಟೆ.
ನಾನು ಅಲಾರಾಮ್ ನ ತಲೆಗೆ ಬಡಿದು ಮಲಗಿಸುವ ಸಮಯ 5.55 !

ಹಿಂದೊಮ್ಮೆ ಅಲಾರಾಮನ ಬಗ್ಗೆ ಬರೆದಿದ್ದೆ ನಾನು..
' ನನಗೆ ಬೇಡ ಅಲಾರಾಮ್ ..
ದಿನ ಮುಂಜಾನೆ ಇರಲು ಎರಡು ಅಲಾರಾಮ್ !
ಒಂದು ಬಾರಿ - ಖಾಜಿ ಕೂಗಲು 'ಅಲ್ಲಾ...'
ಮಗದೊಮ್ಮೆ -ದೇವಸ್ಥಾನದಿಂದ ಕೇಳಿಬರಲು 'ರಾಮ್'.

ನನಗೆ ಬೇಡ ನಿಜಕ್ಕೂ ಅಲಾರಾಮ್..
ಕಾರಣ ಅಲಾರಾಮ್ ಸರಿಯಾಗಿ ನಡೆಯುತ್ತಿದೆಯೋ ಇಲ್ಲವೋ
ಎಂದು ಪರೀಕ್ಷೆ ಮಾಡಲು ಕನಿಷ್ಟ 4-5 ಬಾರಿ ಆದರೂ ನಾನು
ಎದ್ದಿರುತ್ತೆನೆ.ಅಲಾರಾಮ್ ಬೆಚ್ಚಗೆ ಮಲಗಿರುತ್ತದೆ !

5 comments:

Sanath said...

wow..tokyo ದಿ೦ದ ಕನ್ನಡ ಡಿ೦ಡಿಮ...
ಚೆನ್ನಾಗಿದೆ..ತಾಯಿ ಭುವನೇಶ್ವರಿ ಯ ಸೇವೆ ನಡೆಯಲಿ

ಅನಿಕೇತನ said...

ಕನ್ನಡದಲ್ಲಿ ಟೈಪಿಸಲು ಸ್ವಲ್ಪ ಕಷ್ಟವಾದ ಕಾರಣ ಇಷ್ಟು ದಿನ avoid ಮಾಡ್ತಾಇದ್ದೆ !

Seema S. Hegde said...

Very good. Keep it up!
Good to see that the poet in you is waking up (without any alarm!).
All the best.

Chevar said...

oh very good write up. Thumba chennagide...

ಅನಿಕೇತನ said...

@ mahesh chevar
Thanxs for comment and dropping by !