ಹೀಗೊಂದು ಕಥೆ
ಆ ಮನೆಯಲ್ಲಿ ಗಂಡ,ಹೆಂಡತಿ ಇಬ್ರೆ ಇರ್ತಿದ್ದ.
(ನಾನು ಇಲ್ಲಿ ಮೋಟುಗೋಡೆಯಾಚೆಯ ವಿಚಾರ ಹೇಳ್ತಾಇಲ್ಲೆ ! )
ಆ ದಿನ ಬೆಳಗಾ ಮುಂಚೆ ಹೆಂಡತಿ ಮೂರೆ ಮೂರು ದೋಸೆ ಮಾಡಿತ್ತು.
ಎರಡು ದೋಸೆ ಗಂಡಂಗೆ..ಮತ್ತೊಂದು ತಂಗೆ ಹೇಳಿ.
ಅಕಸ್ಮಾತ ಭಾವ ಬಂದ !
ಹೆಂಡತಿಗೆ ಚಿಂತೆ ಶುರು ಆತು ; ಮಾಡಿದ್ದು ಮೂರೇ ದೋಸೆ, ಹಿಟ್ಟೂ ಇಲ್ಲೆ.ಯಂತ ಮಾಡಕಾತು ಹೇಳಿ ಗಂಡನ ಹತ್ರ ಕೇಳ್ಚು.
ಗಂಡ ಹೇಳ್ದ - " ನೀ ಯಂತ ಚಿಂತೆ ಮಾಡಡ.ಯಂಗೆ , ಭಾವಂಗೆ ಮೊದ್ಲು ಆಸ್ರಿಗೆ ಹಾಕು.ಇಬ್ರಿಗೂ ಒಂದೊಂದು ದೋಸೆ ಹಾಕು. ಎರಡನೆ ದೋಸೆ ಮೊದಲು ಯನ್ನ ಹತ್ರ ತಗಂಡು ಬಾ.ಆನು ಯಲ್ಲ ನೋಡ್ಕ್ಯತ್ತಿ ".
ಹೆಂಡತಿ ಹಾಂಗೆ ಮಾಡ್ಚು.
ಒಂದೊಂದು ದೋಸೆ ತಿಂದಾದ ಮೇಲೆ ಎರಡನೇ ದೋಸೆ ಮೊದ್ಲು ಗಂಡನ ಹತ್ರ ತಗಂಡು ಹೋತು.
ಆವಾಗ ಗಂಡ ಹೇಳ್ದ - " ಎರಡು ದೋಸೆ ತಿನ್ನಲ್ಲೆ ಆನು ಯಂತ ಕತ್ತೆ ಹೇಳಿ ಮಾಡಿದ್ಯನೆ, ಭಾವಂಗೆ ಹಾಕು ".
ತಕ್ಷಣ ಭಾವ ಹೇಳ್ದ - " ಯಂಗೂ ಬ್ಯಾಡ, ಹೊಟ್ಟೆ ತುಂಬ್ಚು "
ಮೂರನೆ ದೋಸೆ ಹೆಂಡತಿಗೆ ಉಳತ್ತು.
ಹ್ಯಾಂಗೆ ಗಂಡನ idea ? ಚಲೋ ಇಲ್ಯ ?
( ಕೇಳಿದ್ದು ....)
3 comments:
ಹಹ್ಹಹ್ಹ! ಭಾಳ ಚೊಲೋ ಇದ್ದೋ..! :)
ನಗು ಇರಲು ಜಗದ ನಿಯಮ
ಜೊತೆ ಜೊತೆ ನಗುವು ಮನುಜ ಧರ್ಮ..
ಧನ್ಯವಾದಗಳು !
ನಾನು ಊಟಕ್ಕೆ ಬಂದಾಗ ಈ trick ನಡಿಯೋಲ್ಲ ...
ಈ ಗ್ಯಾರಂಟಿ ನನ್ನದು
:)
Post a Comment