ಆತ್ಮಗತ ಮಾತು
ನಿಮ್ಮ ಮನೆಯ ಬಾಗಿಲನ್ನು ಅದೃಷ್ಟ ಬಡಿಯುವುದು. ( ನೆನಪಿರಲಿ : ನೆಂಟರೂ ಕೂಡ ! ).
For the first time ‘Fortune’ knocks. Next time it’s his daughter that knocks the door, ie. ‘Mis-fortune’.
ಅದೃಷ್ಟ ಎನ್ನುವುದು ಒಮ್ಮೆ ಮಾತ್ರ ಬಾಗಿಲು ಬಡಿದರೆ ‘ ದುರಾದೃಷ್ಟ ‘ ನೀವು ಬಾಗಿಲು ತೆಗೆಯುವ ತನಕ ಬಡಿಯುತ್ತಲೇ ಇರುವುದು.
ಪ್ರತಿಫಲ ಬಯಸಿದರೆ ಅದು ಸೇವೆಯಾಗಲಾರದು. ಅದೊಂದು ಕೆಲಸವಾದಿತು.
ಅದಕ್ಕಾಗಿಯೇ ಸಾರ್ವಜನಿಕ ಆಸ್ಪತ್ರೆ , ಸರಕಾರಿ ಕಛೇರಿಯಲ್ಲಿ ‘ ಪ್ರತಿಫಲ ‘ ಕೊಟ್ಟರೆ ಮಾತ್ರ ನಿಮ್ಮ ಕೆಲಸವಾದಿತು ! ಹಾಗೆಯೇ ಸರಕಾರಿ ಕಛೇರಿಯ ಗೋಡೆಯ ಮೇಲೆ ಕಾಣುವ ಬರಹ – “ ಸರಕಾರಿ ಕೆಲಸ , ದೇವರ ಕೆಲಸ “ . ಆ ಸರಕಾರಿ ಕೆಲಸ , ದೇವರಿಗೇ ಪ್ರೀತಿ. ದೇವರೇ ಬಂದು ಆ ಕೆಲಸ ಮಾಡಿ ಕೊಡಬೇಕು.
ಬದಲಾವಣೆ ನಮ್ಮ ವ್ಯಕ್ತಿತ್ವದಲ್ಲಿ ಆಗಬೇಕು. ವರ್ತನೆಯಲ್ಲಿ ಅಲ್ಲ.
ನನಗೆ ತುಂಬಾ ಬೇಸರವಾದಾಗ, ಘಾಸಿಗೊಂಡಾಗ, ನನಗೆ ನಾನೇ ತುಂಬಾ ನಿರುಪಯುಕ್ತ ಅನ್ನಿಸಿದಾಗ ಒಂದು ವಿಷಯ ನೆನಪು ಮಾಡಿಕೊಳ್ಳುವೆ ! ಆವತ್ತು ಕೋಟ್ಯಂತರ ವೀರ್ಯಾಣುಗಳು ಸ್ಪರ್ಧೆಗೆ ಬಿದ್ದಿದ್ದಾಗ ಅವೆಲ್ಲವನ್ನೂ ಹಿಂದಕ್ಕೆ ಹಾಕಿ ಮಾತೃಗರ್ಭಕ್ಕೆ ಸೇರಿ ಮಗುವಿಗೆ ರೂಪು ಪಡೆದಿದ್ದು ಅತ್ಯಂತ ಯಶಸ್ವಿ ವೀರ್ಯಾಣು ನಾನೇ ಆಗಿದ್ದೆ!
ಇಡಿ ಜಗತ್ತಿನ ಅನುಕಂಪ ಬೇಡುವ ಮನಸ್ಥಿತಿಯನ್ನು ದೂರವಿಟ್ಟರೆ ಮಾತ್ರ ಒಬ್ಬ ಮನುಷ್ಯ, ಏಕಾಂತದಲ್ಲಿ ಗಾಢವಾದ ಜೀವನ ದರ್ಶನ ಹುಟ್ಟುತ್ತದೆ.
ಏನು ನಡೆಯಿತೆಂದಲ್ಲ ಪ್ರಶ್ನೆ. ಅದನ್ನು ಹೇಗೆ ನೋಡಿದೆವೆಂದು ಉತ್ತರ.
1 comment:
nice blog and nice ....writings
Post a Comment