21 January 2008

ಕೋಳಿ ಹಾಗೂ ತಮಾಗೋ

ಜಪಾನಿಗರ ಎಲ್ಲವನ್ನೂ ಸಣ್ಣದಾಗಿಸುವ ಗೀಳಿಗೆ ಪಿಯಾನೋ, ನಾನೋ ಟಾಯ್ಲೆಟ್ ಇತ್ತಿಚಿನ ದಿನಗಳಲ್ಲಿ ಸೇರ್ಪಡೆಯಾದದ್ದು. ಮರಗಿಡದೊಂದಿಗೆ ನಿಸರ್ಗವನ್ನು ಪ್ರೀತಿಸುವ ಹಾಗೂ ಆರಾಧಿಸುವ 'ಶಿಂಟೊ'ಧರ್ಮಾನುಯಾಯಿಗಳ ನಾಡಾದ ಇಲ್ಲಿ ಮರವನ್ನು ಕುಭ್ಜವಾಗಿಸುವ 'ಬೊನ್ಸೈ' ಕಲೆ ಕರತಲಾಮಲಕ ಹಾಗೂ ತಲತಲಾಂತರದಿಂದ ಬಂದಿದ್ದು.

ಎಲ್ಲವನ್ನೂ ಸಣ್ಣದಾಗಿಸಿ ನೋಡುವ ಇವರ ಗೀಳಿಗೆ ವ್ಯತಿರಿಕ್ತವಾಗಿ ಕಂಡಿದ್ದು MacDonalds ನಲ್ಲಿ ಸಿಗುವ MegaTamago (ದೊಡ್ಡ ತತ್ತಿ(ಮೊಟ್ಟೆ)). ಅದರ ಜೊತೆ ಪರಿಚಯಿಸಿದ್ದು MegaMac. ಈ ಮೆಗಾಮ್ಯಾಕ ತಿಂದು ಹೊಟ್ಟೆ ತುಂಬುವುದು ನಿಜವಾದರೂ ದವಡೆ ಜರಿದು ದವಾಖಾನೆ ಸೇರಿದವರ ಲೆಕ್ಕವೂ ಹೆಚ್ಚಾದಂತೆ ತೋರುತ್ತದೆ.




ಈ 'ದೊಡ್ಡತತ್ತಿ'ಗೆ ಬೇಕಾದಂತಹ ಮೊಟ್ಟೆ ಕೇವಲ ಆನುವಮಂಶಿಕವಾಗಿ ಬದಲಾವಣೆಗೊಂಡ ದೊಡ್ಡ ಕೋಳಿಯಿಂದ ಬಂದಿರಬಹುದೆಂದು ಒಂದು ಊಹೆ ಇದೆ.
ಕಾಲವೇ ಎಲ್ಲವನ್ನೂ ಹೇಳಬಲ್ಲುದು.

ಆ ಮೊಟ್ಟೆಗಳ ಪಿತ ಈ ಹುಂಜವೇ ಇರಬಹುದೆನೋ?



ದಿನಚರಿ: ದಿನ-334

1 comment:

Unknown said...

ಮೊಟ್ಟೆಯನ್ನು ಮತ್ತು ಜಪಾನಿಗರನ್ನು ವ್ಯಾಖ್ಯಾನಿಸಿರುವ ರೀತಿ ಬಹಳ ಚೆನ್ನಾಗಿದೆ. ನೀವು ವಿಷಯವನ್ನು ಅಥವಾ ವಸ್ತುವನ್ನು ನೋಡುವ ದೃಷ್ಟಿಕೋನ ಬಹಳ ವಿಬಿನ್ನ.ಕೀಪ್ ಇಟ್ ಅಪ್. ಬಹಳ ಚೆನ್ನಾಗಿ ಮೂಡಿ ಬಂದಿದೆ..ಸ್ನ್ಯಾಪ್ಸ್ ಸಹ ವಿಷಯಕ್ಕೆ ಪೂರಕವಾಗಿದೆ..

ಪ್ರಿಯಾ