(ಇಲ್ಲದ) ಆ ಹೆಣ್ಣಿಗೆ !
( ಈ ಕವಿತೆ ಬರೆದಿದ್ದು ಜೂನ್-1996 ರಲ್ಲಿ. ಇನ್ನೂ ಬ್ಲಾಗಿನ ಪರಿಚಯ ನನಗಿರದ ಸಮಯದಲ್ಲಿ. ಇಂದು ನನ್ನ ಹಳೆಯ ನೋಟ ಬುಕ್ಕ ತಿರುವುತ್ತಾ ಇದ್ದಾಗ ನೆನಪಿನ ಅಂಗಳದಲ್ಲಿ ಸಿಕ್ಕ ಹಳೆಯ ಕವಿತೆ ಇದು. 1996 ರಲ್ಲಿ ಕವಿತೆ ಬರೆಯುವ ಉತ್ಸಾಹ ಎಷ್ಟಿತ್ತೆಂದರೆ ಆ ಸಮಯದಲ್ಲಿ ಗದ್ಯಕ್ಕಿಂತ ಪದ್ಯವನ್ನೇ ಬರೆದಿದ್ದು ಜಾಸ್ತಿ. ಆ ಸೃಜನಶೀಲತೆ ಬಹಳ ಕಮ್ಮಿ ಅವಧಿ ಜೊತೆ ನೀಡಿದ್ದು ನನ್ನ ನೋಟಬುಕ್ಕಿನೆ ಪುಟ ತಿರುವಿದಾಗ ಯಾರಿಗಾದರೂ ಗೊತ್ತಾಗುತ್ತೆ. ಇಂದು ಖಾಲಿ ಹಾಳೆ ನನ್ನನ್ನು ಅಣುಕಿಸುತ್ತಿದ್ದರೆ, ನಾನು ನನಗೆ ಸಂಬಂದವೇ ಇಲ್ಲ ಅನ್ನುವಷ್ಟು ನೀರ್ಲಪ್ತ ಹಾಗೂ ನಿರ್ಲಜ್ಜ . Somewhere, something is wrong ... I don't know )
ಹೇ, ನೆರೆಮನೆಯ ಹೆಣ್ಣೆ
ನೀನೇ ನನ್ನ ಬದುಕಿನ ಕಣ್ಣೆ!
ನಿನ್ನ ನೆನೆಯುತ ನಾನು
ಎಲ್ಲವ ಮರೆತೆ
ಇರಲು ಒಂದೇ ಚಿಂತೆ,
" ನನ್ನಿಂದ ದೂರವೇಕೆ ನೀನು? "
ನಿನ್ನ ನಗುಮುಖವನ್ನ
ದಿನವೂ ನೋಡಲೇಷ್ಟು ಚೆನ್ನ!
ಆ ತುಂಟ ಕಣ್ಣಿನ ನೋಟ
ಎಲ್ಲರಲೂ ನಾ ಕಾಣೆ
ನನ್ನ ದೇವರಾಣೆ
ನಿನ್ನ ನೋಡದೆ ಸೇರದು ಊಟ
ನೀನು ಹೋಗಲು ದೂರ
ನಾ ನಿತ್ರಾಣಗೊಂಡ ಶೂರ
ಬಿಟ್ಟು ಬಾ ನಿನ್ನ್ ಒಣ ಬಿಗುಮಾನ
ನಿನ್ನ ದಾರಿ ಕಾಯುತ
ನಿಂತಿರಲು ನಾ ಅನವರತ
ಅಂಧಕಾರದಲಿ ಇರುವ ಚಂದ್ರ ನಾ
ದಿನವೂ ಕಣ್ಣುಮುಚ್ಚಾಲೆ ಆಟ
ಇರಲು ನಿಮ್ಮಪ್ಪನ ಕಾಟ
ಮನೆಯಲಿ ಆತನ ಗೈರು ಹಾಜರಿ
ತಂದಿರುವ ಕಳೆ ವಿಶೇಷ
ಎಷ್ಟು ದಿನವೀ ಸಂತೋಷ
ತಿಳಿಯದಿರೆ ನಾ ಕಥಾಂತ್ಯದ ಪರಿ
4 comments:
ಇಲ್ಲದ ಹುಡುಗಿಯ ಕಲ್ಪನೆ ಚೆನ್ನಾಗಿದೆ...ಅದನ್ನು ಕವನದಲ್ಲಿ ರೂಪಿಸಿರುವ ಶೈಲಿ ಬಹಲ ಚೆನ್ನಾಗಿದೆ... ಯಾರದೂ existance ಇಲ್ಲದೆ imagine ಮಾಡಿಕೊನ್ಡು ಬರೆದಿದ್ದೀರ ಅನ್ದರೆ ನೀವು ಗ್ರೆಟ್. ಆದರೂ ನಿಮ್ಮ ಗದ್ಯದ ಶೈಲಿ ನನಗೆ ಬಹಲ ಇಶ್ಟ compared to ಕವನ...
ಕವಿತೆ ತುಂಬಾ ಚೆನ್ನಾಗಿದೆ. ಅದಕ್ಕಿಂತಲೂ ಮೇಲಿನ ಬರಹ ಇನ್ನೂ ಚೆನ್ನಾಗಿದೆ. ನನಗೆ ಗೊತ್ತು. ನೀವು ಇಲ್ಲದ ಹೆಣ್ಣನ್ನು ಏನು, ಏನನ್ನು ಬೇಕಾದರೂ ಕಲ್ಪಿಸಿಕೊಂಡು ಬರೆಯಬಲ್ಲ ಅದ್ಭುತ ಕಲೆಯನ್ನು ಹೊಂದಿದವರು. ನಿರ್ಲಿಪ್ತ, ನಿರ್ಲಜ್ಜ ಎಂಬೆಲ್ಲಾ excuse ಗಳು ಬೇಡ. ಒಮ್ಮೆ ಮೈ ಕೊಡವಿ ಅಷ್ಟೇ. ಇನ್ನು ಮುಂದೆ ಬರಹಗಳು ಪುಸ್ತಕದಿಂದ ಮಾತ್ರವಲ್ಲದೇ ಮಸ್ತಕದಿಂದಲೂ ಹೊರಗೆ ಬರುವಂತಾಗಲಿ. When somewhere something goes wrong, just set it right. All the best!
ಅನಿಕೇತನ...
ಕವನ ಚೆನ್ನಾಗಿದೆ. ಎಲ್ಲ ಸಾಲುಗಳೂ ಇಷ್ಟವಾದವು.
ಪ್ರಿಯಾ, ಸೀಮಾ, ಶಾಂತಲಾ,
ಧನ್ಯವಾದಗಳು.
Post a Comment