ಹಣ (ಕವನ)
(ಊರೂರು ತಿರುಗುವ ಸಾಧುಗಳು ನೋಡಿ ಪ್ರೇರಿತವಾಗಿ ಬರೆದ ಈ ಕವಿತೆ ನನ್ನ ಪುಟ ಹಳದಿಯಾದ ನೋಟಪುಸ್ತಕದ ಒಂದು ಪುಟವ ಅಲಂಕರಿಸಿತ್ತು ಇಷ್ಟು ದಿನ. ಇಂದೆಕೋ ಮತ್ತೋಮ್ಮೆ ಆ ಹಳೆಯ ಪುಟಗಳ ಸೆಳೆತೆ ಜಾಸ್ತಿಯಾದ ಕಾರಣ ಪ್ರೀತಿಯಿಂದ ತಿರುವಾಡಿದಾಗ ಕಣ್ಣಿಗೆ ಬಿತ್ತು. )
ಎಲ್ಲೆಲ್ಲೂ ನಾ ಕಾಣುತಿರುವೆ ಹಣ
ಅದಿಲ್ಲದೆ ಜೀವನ ಆಗಿದೆ ಬಣಬಣ
ನಂಬಿದರೆ ಕಾಯಕವೇ ಕೈಲಾಸ
ಬಿಡದು ನಂಟು ಗುಡಿಸಲ ವಾಸ
ಇನ್ನೊಬ್ಬರ ಮೂರ್ಖತ್ವ ಕ್ಯಾಶ ಮಾಡುವ ಕಲೆ
ತಿಳಿದಿರಲು ನಿನಗೆ ನಾ ಹೇಳುವೆ 'ಭಲೇ!'
ಈ ಭೂಮಿತಾಯಿಯ ಮೇಲೆ ಆಣೆ
ನ್ಯಾಯವಾಗಿ ಶ್ರೀಮಂತರಾದವರ ನಾ ಕಾಣೆ *
ಹಣದಿಂದಲೇ ಬರುವ ಆ ಅಂತಸ್ತು
ಅದಿದ್ದವನದೇ ಈಗ ಎಲ್ಲ ಗತ್ತು
ಮನಕ್ಷೋಭೆಯಲಿ ಆಗುವರು ಹೆಣ
ಗಗನಕುಸುಮವಾಗಿರಲು ಕಾಂಚಾಣ
ಮಧ್ಯಮ ವರ್ಗದವರನು ಬಿಡದ ಬವಣೆ
ಇದ್ದಿರಲು 'ಮರ್ಯಾದೆ' ಎಂಬ ಪರದೆ
ಬಡವ,ಸಿರಿವಂತರಲಿ ಇದನು ನಾ ಕಾಣೆ
ನೆನಪಿರಲಿ 'ಮಧ್ಯಮನೆ ಅಧಮ' ಗಾದೆ
ಕೈಗೂಡದಿರಲು ಹಣ ಎಂಬ ಸಂಗಾತಿ
ನಾ ತಿರುಗುತಿರುವೆ ಬಳಿದುಕೊಂಡು ವಿಭೂತಿ
* ( ಇನ್ನೊಬ್ಬರನು ಮೂರ್ಖರ ಮಾಡುವುದು ಊರೂರು ತಿರುಗುವ ಸಾಧು, ಸಂತರ ವರ್ತನೆ ಅಂಥ ಭಾವಿಸಬಾರದು. ಕವನಕ್ಕೆ ಬೇಕಾದ ತ್ರಾಸ, ಪ್ರಾಸಕ್ಕೆ ಇಲ್ಲಿ ಅದರ ಬಳಕೆ ಆಗಿದೆ. ಹಾಗೆಯೇ 'ನ್ಯಾಯವಾಗಿ ಶ್ರೀಮಂತರಾದವರ ನಾ ಕಾಣೆ' ಎನ್ನುವುದು ಒಬ್ಬ ಜೀವವನದಲ್ಲಿ ಅತಿಯಾಗಿ ನೊಂದ, ಕಷ್ಟವನ್ನೆ ಕಂಡ ಮನುಷ್ಯನಿಂದ ಬರುವ ಸಹಜವಾದ ದೂರು ಎನ್ನುವಂತೆ ಇಲ್ಲಿ ಹೇಳಲಾಗಿದೆ.)
4 comments:
ಕೈಗೂಡದಿರಲು ಹಣ ಎಂಬ ಸಂಗಾತಿ
ನಾ ತಿರುಗುತಿರುವೆ ಬಳಿದುಕೊಂಡು ವಿಭೂತಿ
ಚೆನ್ನಾಗಿದೆ.
ಅನಿಕೇತ,
ಹಣದ ಬಗೆಗೆ ನಮಗೆಲ್ಲರಿಗೂ ಇರುವ ಭಾವನೆಗಳಿಗೆ ಸುಂದರವಾದ ರೂಪ ಕೊಟ್ಟಿದ್ದೀರಿ. ಚಂಚಿಯಲ್ಲಿ ಪೈಸಾ ಇರಲಿ ಬಿಡಲಿ, ಇಂತಹ ಕವನ ಓದಿದಾಗ million doller note ಕಂಡ ಖುಶಿಯಾಗುತ್ತೆ.
ಧನ್ಯವಾದಗಳು... ಕಮೆಂಟಿಸಿದ್ದಕ್ಕೆ ... ಹಾಗೂ ಓದುವ ಖುಷಿಯಲ್ಲಿ ಪಾಲ್ಗೊಂಡ್ಡಿದ್ದಕ್ಕೆ ..!
Sir manushyaru hana anno amalinalli mugudavarige badidu chechharava agide sir I kavana
Post a Comment