08 February 2008

ಎರವಲು ಪಡೆದಿದ್ದು

# ಈ ಪುಸ್ತಕದ ಬಹುದೊಡ್ಡ ದೋಷವೆಂದರೆ ಓದುಗನಾದ ನೀನೆ.
ನಿನಗೆ ವಯಸ್ಸಾಗುವ ಅವಸರ.
ಆದರೆ ಈ ಪುಸ್ತಕ ನಿಧಾನವಾಗಿ ಮುಂದುವರೆಯುತ್ತದೆ.
ನಿನಗೆ ನೇರವಾದ, ಸಾಕಷ್ಟು ಸತ್ವವುಳ್ಳ ಕತೆ ಇಷ್ಟ. ಜೊತೆಗೆ ಸರಳವಾದ ಶೈಲಿ ಬೇಕು.
ಆದರೆ ಈ ಪುಸ್ತಕ ಮತ್ತು ನನ್ನ ಶೈಲಿ ಕುಡುಕರ ಹಾಗೆ ಎಡವುತ್ತಾ ಮುಗ್ಗರಿಸುತ್ತದೆ.

# ನನ್ನ ಕಳೆಬರದ
ತಣ್ಣಗಿನ ಮಾಂಸವನ್ನು ಅಗಿದು
ತಿನ್ನುವ ಮೊದಲ ಹುಳುವಿಗೆ
ಈ ಮರಣೋತ್ತರ ಸಂಸ್ಮರಣೆಯನ್ನು
ಪ್ರೀತಿಯಿಂದ ಅರ್ಪಿಸುತ್ತೇನೆ.

# ಇನ್ನೊಬ್ಬರ ಹೊಟ್ಟೆಯಲ್ಲಿರುವ ನೋವನ್ನು ನಾವು ಅನಾಯಾಸವಾಗಿ, ಅತ್ಯಂತ ತಾಳ್ಮೆಯಿಂದ ಸಹಿಸಿಕೊಳ್ಳಬಹುದು.

# ನಾವು ಕಾಲವನ್ನು ಕೊಲ್ಲುತ್ತೇವೆ.
ಕಾಲ ನಮ್ಮನ್ನು ಹೂತು ಬಿಡುತ್ತದೆ.

(ಬ್ರೆಜಿಲ್ಲನ ಬರಹಗಾರ - ಮಜಾದೊ ದ ಅಸಿಸ್ ನ 'Epitaph of a small winner' ಪುಸ್ತಕದಿಂದ ಆಯ್ದದ್ದು )

2 comments:

sunaath said...

ಮಜಾದೊ ದ ಅಸಿಸ್ ನ ಪುಸ್ತಕವನ್ನು ಓದುವದು ನನಗಂತೂ ಆಗಲಾರದು. ಅವನ ಒಳ್ಳೆಯ ಸಾಲುಗಳನ್ನು ನಮಗೆ ಉಣಬಡಿಸಿದ್ದಕ್ಕಾಗಿ ಧನ್ಯವಾದಗಳು.

ಅನಿಕೇತನ said...

ಧನ್ಯವಾದಗಳು... ಹಾಗೂ ನನ್ನ 'ಆನುಭವ'ಕ್ಕೆ ಸ್ವಾಗತ !