04 June 2007

ಹರಟೆ-2

ಸೀಸದ ಕಡ್ಡಿಯಿಂದ ಕಲಿಯಬಹುದಾದಂತಹ ಪಾಠ :

ನೀವು ಮಾಡುವ ಪ್ರತಿಯೊಂದು ಕೆಲಸವೂ ಜೀವನ ಎನ್ನುವ ಹಾಳೆಯ ಮೇಲೆ ತನ್ನ ಚಾಪು ಮೂಡಿಸುವುದು.
ನಿಮ್ಮ ತಪ್ಪನ್ನು ನೀವು ತಿದ್ದಿ ಕೊಳ್ಳುವ ಸಾಧ್ಯತೆ ಇದೆ.
ಬಾಹ್ಯ ರೂಪಕ್ಕಿಂತ ಮುಖ್ಯವಾದದ್ದು ನಿಮ್ಮ ನಿಜವಾದ ಅಂತರ ರೂಪ.
ತ್ರಾಸದಾಯಕವಾದರೂ ನಿಮ್ಮನ್ನು ನೀವು ಹರಿತಗೊಳಿಸಿಕೊಂಡಾಗ ಮಾತ್ರ ಉತ್ತಮ ಮನುಷ್ಯರಾಗಲು ಸಾಧ್ಯ.
ಸೀಸದಕಡ್ಡಿಯ ಹಿಡಿದು ನಡೆಸುವ ಹಸ್ತದಂತೆ ನಮ್ಮನ್ನು ಶ್ರೇಷ್ಠತೆಯ ಹಾದಿಯಲಿ ನಡೆಸುವ ಕೈಗೆ ನಮ್ಮನ್ನು ನಾವು ಒಪ್ಪಿಸಿಕೊಳ್ಳಬೇಕು. ( ನಾಸ್ತಿಕರೇ ಕ್ಷಮೆಯಿರಲಿ)

(For English version pls visit ರೋಹಿತ )

ಸಹ ಜಾಲಚರಿ ಶ್ರೀಯವರು ತಮ್ಮ ಅನಿಸಿಕೆಯನ್ನು ಸಹ ಈ ಕೆಳಗಿನಂತೆ ಹೇಳಿದ್ದಾರೆ.

1. ನಾವು ಒಳ್ಳೆಯವರಾಗುತ್ತಾ ಹೋದ ಹಾಗೆ ನಮ್ಮ ಅಸ್ತಿತ್ವ ಸಣ್ಣದಾಗುತ್ತಾ ಹೋಗುತ್ತದೆ.

2.ಯಾವ ದಿನ ಹಿಡಿದು ನಡೆಸುವ ಕೈಗಳು ನಮ್ಮನ್ನು ಹಿಡಿಯದ ಪರಿಸ್ಥಿತಿ ಬರುವದೋ ಆಗ ಆ ಕೈಗಳು ಹೊಸ ಸೀಸದ ಕಡ್ಡಿಯನ್ನು ಹುಡುಕುವುದು. ಉಪಯೋಗಕ್ಕೆ ಬರುವಷ್ಟು ದಿನ ಮಾತ್ರ ನಮ್ಮ ಅಸ್ತಿತ್ವ. ಇದು ಜಗದ ನಿಯಮ. ( ಯಾವತ್ತೂ ಹೊಸದರಲ್ಲಿ ಸುಖ ಹುಡುಕುವುದು ಜಗದ ನಿಯಮ! ) Its in our genes , I believe.


ಆಲೋಚನೆ:

ನಾನು ನಿನ್ನ ಬಗ್ಗೆ ದಿನವಿಡಿ ಆಲೋಚಿಸುತ್ತಿರುತ್ತೆನೆ.
ಅವರು: " ಜೀವನದ ಬಗ್ಗೆ ಆಲೋಚಿಸು"
ನಾನು: ಸಾರಾಸಗಟಾಗಿ " ಇಲ್ಲಾ".
ಕಾರಣ ನನ್ನ ಜೀವನ ನೀನೇ ತಾನೇ !


ಎಲ್ಲ ವಿಜ್ಙಾನದ ವಿದ್ಯಾರ್ಥಿಗಳಿಗೆ ಗೊತ್ತು ಬೆಳಕಿನ ವೇಗ ಎಷ್ಟು ಅಂತ.ಉತ್ತರ : ಸೆಕೆಂಡಿಗೆ 299,792,458 ಮೀಟರ್. ಹಾಗಿದ್ದಲ್ಲಿ ಕತ್ತಲೆಯ ವೇಗ ಎಷ್ಟು ? ಬೆಳಕಿನ ವೇಗದಷ್ಟೇ ... ಕಾರಣ ಬೆಳಕಿನ ವೇಗದಷ್ಟೆ ವೇಗವಾಗಿ ಕತ್ತಲೆ ಹಿಂಜರಿಯಬೇಕಲ್ಲಾ !

ಭೂಮಿಯ 3/4 ಭಾಗ ನೀರಿನಿಂದ ತುಂಬಿದ್ದರೂ ನಾವು ಭೂಮಿಯನ್ನು 'ಸಮುದ್ರ' ಅಂತ ಯಾಕೆ ಕರೆಯುವದಿಲ್ಲಾ ?

ಸುರಂಗದ ಇನ್ನೊಂದು ತುದಿಯಲ್ಲಿ ಸದಾ ಬೆಳಕಿರುತ್ತದೆ ಎಂದು ಭಾವಿಸಿದ್ದೆ ನಾನು. ರೈಲಿನ ಬೆಳಕು ಕಣ್ಣಿಗೆ ಬೀಳುವ ತನಕ!

ಕೆಲಸ ಒಂದು ಸುಂದರ ಚಿತ್ರ ಇದ್ದಂತೆ. ಅದನ್ನು ನೋಡುತ್ತಾ ಗಂಟೆಗಳ ಕಾಲ ಕುಳಿತರೂ ಬೇಸರ ಎನ್ನಿಸುವುದಿಲ್ಲಾ.ಚಿತ್ರ ಬರೆಯುವ ಪ್ರಸಂಗ ಬಂದಾಗ ಮಾತ್ರ ಕಷ್ಟ !

4 comments:

Anonymous said...

ಬೆಂಗಳೂರಿನಲ್ಲಿ ಬೆಂಗಳೂರಿನ ಕನ್ನದವರು ಅದು ಟೇಕಿ ಆಗಿ ಬ್ಲೋಗನ್ಣು ಬರೆಯುವುದು ದೊಡ್ಡ ವಿಷಾಯವೀ ಹೌದು. :)
ಅದು ಕನ್ನಡದಲ್ಲಿ.. ಬಹಳ ಸಂತೋಷ. ಕರ್ನಾಟಕದ ಕೆ. ಎ. ಎಸ್ ಅನ್ನು ಪಾಸು ಮಾಡಿ ಈಗ ನಮ್ಮ ಸರ್ಕಾರದ ಅತಿ ಅಮೂಲ್ಯ ವಾಸಿತ್ಯವನ್ನು ಅನುಭವಿಸುತಿರುವ ನಾನು ಈಗ ನಿಮ್ಮಾಳ್ ಅನುಭವಾದ ಹಾರುಟೆ ಅನ್ನು ಬಹಳ ಇಷ್ಟ ಪಟ್ಟಿದ್ದೀನಿ.

ನಿಮ್ಮ ಹರಟೆ ಅಲ್ಲಿ ಬಹಳ ಅರ್ಥವಿಧೆ.. ಭಕ್ತ ಕುಂಬಾರನು ನಾಮದೇವನಿಗೆ ತಾನು ಹೇಳುವುದರಲ್ಲಿ ಮೂಲವಿಲ್ಲವಾದರೂ ಕೇಳಬಹುದು ಎಂದು ಹೇಳಿದಂತೆ, ನೀವು ಹರಟೆ ಎಂದು ಹೆಸರಿಸಿ ಅದರಲ್ಲಿ ಜ್ಞಾನವನ್ನು ಹುಟ್ಟಿಸುತ್ತಿದ್ದೀರಾ.. ಇನ್ನೊಂದು ವಿಷಯ.. ನನಗೆ ಕೆಲಸದ ಸಮಯದಲ್ಲಿ.. ಬ್ಲೋಗುಗಳನ್ನು ಬರೆಯಬೇಕೆಂದರೆ, ಸ್ವಲ್ಪ ಕಷ್ಟ.. ಅದಕ್ಕೆ ನನಗೆ, ಇದೊಂದು ಅಪೂರ್ವ ಸೈಟ್ ಸಿಕ್ಕಿದೆ. ಇದರಲ್ಲಿ, ಯಾವುದೇ ಕಷ್ಟವಿಲ್ಲದೇ, ಕನ್ನದಲ್ಲಿ ಬರೆಯಬಹುದು. ನನ್ನ ಈ ಸಣ್ಣ ಜ್ಞಾನ ವನ್ನು ನಿಮ್ಮಂತಹ ಬೃಹತ್ ಟೇಕಿಗೆ ಹೇಳಬೇಕೆಂದು ಅನಿಸಿತು.. ಅದಕ್ಕೆ, ನನ್ನ ಅಲಿಲುಸೇವೇ.. ನಿಮಗೆ ಎಲ್ಲೇ ಇರಿ, ಬ್ಲೋಗ್ ಅನ್ನು ಬರೆಯಬೀಕೆಂದರೆ, ಇಲ್ಲಿಗೆ ಹೊರಾಟಿ ಅದನ್ನೇ ಮಾಡಿ. :)
http://quillpad.in/kannada/

ಅನಿಕೇತನ said...

ಧನ್ಯವಾದಗಳು.
ನಾನು ಉಪಯೋಗಿಸುತ್ತಿರುವುದು
http://www.iit.edu/~laksvij/language/kannada.html

Enigma said...

visited

ಅನಿಕೇತನ said...

ಧನ್ಯವಾದಗಳು