14 August 2007

ಚಮಚಾಗಿರಿ

ಚಮಚಾಗಿರಿ :
ನಮಗೆ ಅರಿವಿಲ್ಲದಂತೆ ವಾಕ್ಯದಲ್ಲಿರುವ ಒಂದು ಜೊತೆ ಶಬ್ದಗಳ ಅಕ್ಷರ ಬದಲಾವಣೆ ಮಾಡುವಿಕೆಗೆ 'ಚಮಚಾಗಿರಿ' ಎನ್ನಬಹುದು.

( spoonerism
1900, but perhaps as early as 1885, involuntary transposition of sounds in two or more words (cf. "a well-boiled icicle" for "a well-oiled bicycle;" "scoop of boy trouts" for "troop of Boy Scouts"), in allusion to the Rev. William A. Spooner (1844-1930), warden of New College, Oxford, who was famous for such mistakes. )

ಹಂದಿಯ ಮರಿ
ಮಂದಿಯ ಹರಿ

ವೀರಭದ್ರನ ಸರಸ ಸಲ್ಲಾಪ
ಸರಭದ್ರನ ವಿರಸ ಸಲ್ಲಾಪ

ಹರಿಯೇ ನಾ ತಾಳಲಾರೆ ಈ ಉರಿಯ
ಉರಿಯೇ ನಾ ತಾಳಲಾರೆ ಈ ಹರಿಯ

ಬಾಡಿಗೆಗೆ ತಂದ ಗಾಡಿ
ಗಾಡಿಗೆಗೆ ತಂದ ಬಾಡಿ

ಪೇಪರನ್ನು ಓದ್ರೊ ....
ಓಪರನ್ನು ಪೆದ್ರೊ !

6 comments:

Unknown said...

ಹಬಳ ಬುಷಾರಿದ್ಯೋ!!

ಅನಿಕೇತನ said...

ರೇತನಾ ಚೋಹಿತ್ ಧನ್ಯವಾದಗಳು !

Anonymous said...

Just to add on the list:
#. ಕಾಯ್‌ ಹೋಳಿಗೆ - ಹಾಯ್‌ ಕೋಳಿಗೆ!

#. ಸದ್ದು ಮಾಡುವ ಹಪ್ಪಳ - ಹದ್ದು ಮಾಡುವ ಸಪ್ಪಳ

#. ಇಂಧನಕ್ಕಾಗಿ ಬಿದ್ದವರು - ಬಂಧನಕ್ಕಾಗಿ ಇದ್ದವರು (ಇರಾಕ್‌ ವಿರುದ್ಧ ಅಮೆರಿಕದ ‘ತೈಲದಾಹದ’ ಯುದ್ಧದಲ್ಲಿ ಬಾಗ್ದಾದ್‌ ಮೇಲೆ ಮುಗಿಬಿದ್ದ ಸೈನಿಕರು ಮತ್ತು ಯುದ್ಧದ ಸೆರೆಯಾಳುಗಳು)

#. ಹರ ಕೊಲ್ಲಲ್‌ ಪರ ಕಾಯ್ವನೇ? - ಕರ ಕೊಲ್ಲಲ್‌ ಪರ ಹಾಯ್ವನೇ? (ಟಾಕ್ಸ್‌, ಟಾಕ್ಸ್‌, ಟಾಕ್ಸ್‌... ಈಗ ವ್ಯಾಟ್‌ ಬೇರೆ. ಒಟ್ಟಿನಲ್ಲಿ ಕರ ನಮ್ಮ ಜೀವ ಹಿಂಡುತ್ತಿದೆಯೇ?)

#. ಕಡೆಯುವವಳಿಗಾದ ನಷ್ಟ - ನಡೆಯುವವನಿಗಾದ ಕಷ್ಟ (ನಂದಗೋಕುಲದಲ್ಲಿ ಒಮ್ಮೆ ಯಶೋದೆ ಮೊಸರು ಕಡೆಯುತ್ತಿದ್ದಾಗ ಸ್ವಲ್ಪ ಬೆಣ್ಣೆ ಚೆಲ್ಲಿತು. ಅಲ್ಲೇ ಓಡಾಡುತ್ತಿದ್ದ ಬಾಲಕೃಷ್ಣ ಜಾರಿ ಬೀಳುವ ಸಂದರ್ಭ ಬಂತು...)

#. ಹಾವೇರಿ ಸಮೀಪದ ಕಾಡು - ಕಾವೇರಿ ಸಮೀಪದ ಹಾಡು (ಬಯಲುಸೀಮೆಯ ಹಾವೇರಿಯ ಬಳಿ ಕಾಡು ಸಿಗುವುದು ಕಷ್ಟವೋ ಏನೊ, ಆದರೆ ಕಾವೇರಿಯ ಕುರಿತ ಹಾಡು ಶರಪಂಜರ ಅಥವಾ ಜೀವನದಿ ಸಿನೆಮಾದ ಟೈಟಲ್‌ ಸಾಂಗ್‌ ಇದೆಯಲ್ಲ !)

#. ಕನ್ನಡಕ್ಕೆ ಎಡೆಯಿಲ್ಲದ ಬೆಂಗಳೂರಲ್ಲಿ ‘ಎನ್ನಡ?’ಕ್ಕೆ ಕಡೆಯಿಲ್ಲ ! (ರೊಂಬ ನೋವಾಗ್ತದೆ ಈ ವಿಚಾರಾನ ನೆನೆದ್ರೇ... ಯೆದಕ್ಕ್‌ ಹೀಗಾಯ್ತು?)

#. ಬಾನು ತಲೆಯ ಮೇಲಿದೆಯೆಂದು ಹೇಳಿದವಳು - ಹೇನು ತಲೆಯ ಮೇಲಿದೆಯೆಂದು ಬಾಳಿದವಳು! (ಪ್ರಾಣಿದಯಾ ಸಂಘದವಳಿರಬೇಕು, ಆತ್ಮಹತ್ಯೆಗೆಂದು ಹೊರಟವಳು ತಲೆಯಲ್ಲಿನ ಹೇನು ಸಾಯಬಾರದೆಂದು ತಾನೂ ಆತ್ಮಹತ್ಯೆಯ ಐಡಿಯಾ ಕ್ಯಾನ್ಸಲ್‌ ಮಾಡಿದಳು!)

#. ಸ್ಕೂಲ್‌ಗೆ ಹೋಗಲು ತಡವಾಗುತ್ತದೆಂದು ತಾಯಿ, ಬಟ್ಟೆ ಹಾಕು ಎಂದು ಹೇಳಿದರೆ ಹಸಿದಿದ್ದ ಮಗುವಿನ ಬಾಯಿ ತಟ್ಟೆ ಹಾಕು ಎಂದಿತ್ತು !

courtesy: Shrivathsa Joshi of Vichitraanna fame

Seema S. Hegde said...

ಇನ್ನೂ ಕೆಲವನ್ನು ಸೇರಿಸಬಹುದು...
ಈ ಕೆಳಗಿನವುಗಳನ್ನು ಯಾವ ಕಡೆಯಿಂದ ಓದಿದರೂ ಒಂದೇ ರೀತಿ ಓದಬಹುದು.

1. ಗಜಾನನನಜಾಗ
2. ಕುಬೇರನಿಗೆನಿರಬೇಕು
:)

dinesh said...

It is also known as malapropism.
Malaprop is a character in the dram.... marethu hogide.... yava drama mattu yaru brrediddu antha.

ಅನಿಕೇತನ said...

Dinesh, Thank you.
More info abot Malapropism : The term "malapropism" however, is generally attributed to the public reaction to Richard Brinsley Sheridan's 1775 play The Rivals, and in particular the character Mrs. Malaprop.
- Courtesy Wikipedia.