29 September 2007

ಸಾವು – ಪತ್ರ – ಸಾರಾಂಶ



ಹೀಗೆ ಒಂದು ಸಾವಿನ ಮುಂಚೆ ಬರೆದ ಪತ್ರದ ಸಾರಾಂಶ :

.....ಈ ಬಾಳು ಇಲ್ಲಿಲ್ಲ. ಇವತ್ತಿನ ಬದುಕು ಬದುಕೇ ಅಲ್ಲ. ಇದನ್ನು ತಿರಸ್ಕರಿಸಬೇಕು. ಇಲ್ಲಿಂದ ನಿರ್ಗಮಿಸಬೇಕು. ಇಲ್ಲಿ ಸತ್ತು, ಇಲ್ಲಿ ಕೊಳೆತು, ಇನ್ನೆಲ್ಲೋ ಚಿಗುರಬೇಕು. ನನ್ನ ಅಸ್ತಿತ್ವಕ್ಕೆ ಅರ್ಥವಿಲ್ಲ. ಇದು ಉತ್ತುಂಗ ಪರ್ವತದ ತುದಿಯೂ ಅಲ್ಲ; ನಿರ್ಜನ – ನೀರವ ಪ್ರಪಾತದ ಆಳವೂ ಅಲ್ಲ. ಇದು ನಿರ್ಮಾನುಷ ಬಯಲು.ಈ ಬಯಲಿನಲ್ಲಿ ಏನೂ ಬೆಳೆಯುವುದಿಲ್ಲ. ಏನೂ ಘಟಿಸುವುದಿಲ್ಲ. ಇಲ್ಲಿಗೆ ಯಾರು ಬರುವುದಿಲ್ಲ. ಇಲ್ಲಿಂದ ಹೊರಕ್ಕೆ ಹೋಗಲು ದಾರಿಯೂ ಇಲ್ಲ. ಬಯಲಿನಲ್ಲಿ ನಾನು ಒಂಟಿ ; ಒಬ್ಬಂಟಿ.
ನನ್ನೊಂದಿಗೆ ನಾನೆ ಮಾತಾಡಿಕೊಳ್ಳಬೇಕು. ನಾನೇ ಸಂತೈಸಿಕೊಳ್ಳಬೇಕು. ನನ್ನೊಂದಿಗೆ ನಾನೇ ದುಃಖ ಹೇಳಿಕೊಳ್ಳಬೇಕು,ಇಲ್ಲಿ ಸಾಯುವ ಸವಲತ್ತೂ ಇಲ್ಲ. ಬದುಕುವುದಕ್ಕೆ ಬೇಕಾಗುವ incentive ಕೂಡ ಇಲ್ಲ. ಹೇಗೆ ಬದುಕಿರಲಿ? ಅಥವಾ ಹೇಗೆ ಸಾಯಲಿ ? ನನ್ನಿಂದ ಯಾರನ್ನೂ ಪ್ರೀತಿಸಲೂ ಸಾಧ್ಯವಾಗುತ್ತಿಲ್ಲ. ಮತ್ತು ನನ್ನನ್ನು ಯಾರೂ ಪ್ರೀತಿಸುತ್ತಿಲ್ಲ. ( ನಾನು ನಿರೀಕ್ಷಿಸಿದಂತೆ ಅನ್ನಲೇ ? ( ಈಗಲೂ ಬಿಡದ ನನ್ನ ಕುಹುಕತನ ! ))

.
.
.

I am Destitute. ನಾನು ಅನಾಥ. ಅನಾಥರನ್ನು ದೇವರು ಮಾತ್ರ ರಕ್ಷಿಸುತ್ತಾನಂತೆ. ನನ್ನ ಪಾಲಿಗೆ ದೇವರೇ ಇಲ್ಲ. ಅವನನ್ನೇ ನಂಬದವನಿಗೆ , ಅವನು ಕೊಡುವ ರಕ್ಷಣೆಯಲ್ಲಿ ಅದೆಂಥ ನಂಬಿಕೆಯಿದ್ದೀತು ?
.
.
.
……………… ನಾನು ಕಾಲವನ್ನು ಕಂಡ ಕಂಡಲ್ಲಿ ಕೊಂದುಬಿಟ್ಟೆ . ಈಗ ನಾನು ಕಾಲನ ಕೃಪೆಯಲ್ಲಿ ಇದ್ದೆನೆ. ನನ್ನನ್ನು ಹೂಳಲು ಕಾಲ ತಯಾರಾಗಿ ನಿಂತಿದೆ ! ….ಇದುವೇ ಜೀವನ.

3 comments:

Seema S. Hegde said...

ತುಂಬಾ ಚೆನ್ನಾಗಿದೆ,
ಆದ್ರೆ ಭಯ ಆಗತ್ತೆ... :(

dinesh said...

nice lines....

ಅನಿಕೇತನ said...

ದಿನೇಶ ಹಾಗೂ ಸೀಮಾ ,
ಧನ್ಯವಾದಗಳು ! ...

ದಿನೇಶ ... ನಿಮ್ಮ ಕವನಗಳು ಚೆನ್ನಾಗಿವೆ ...
ಸೀಮಾ ... ನಿಮ್ಮ ಉತ್ತರಕನ್ನಡದ ಗಾದೆಗಳ ಸಂಗ್ರಹಕ್ಕೆ Hats off ! ..