ವಿಡಂಬನೆ
ಜಪಾನಿನ ರೈಲು ಪ್ರಯಾಣದಲ್ಲಿ ಖಾಯಂ ನೋಡುವ ದೃಶ್ಯದಲ್ಲಿ ಇದೂ ಒಂದು. ಜನರಿಂದ ತುಂಬಿದ ರೈಲಿನಲ್ಲೂ ಗದ್ದಲ ಇಲ್ಲವೇ ಇಲ್ಲ. ಮೊಬೈಲ ಕಿಂಕಿಣಿಯೂ ಇಲ್ಲ. ಜನರ ಮಾತೂ – ಪಿಸುಮಾತಿನಲ್ಲೆ. ಇಂತಹ ವಾತಾವರಣದಲ್ಲಿ ನಿದ್ದೆ ಬರದೆ ಇನ್ನೇನು ಮಾಡಲು ಸಾಧ್ಯ ?…ಈ ಚಿತ್ರ ಬಹಳ ಮುಗ್ಧವಾಗಿ ಕಾಣುವುದು ಅಲ್ವಾ ..
ಆದರೆ ….
ಅತಿಯಾದ ದುಡಿತದಿಂದಾಗಿ ಒಬ್ಬ ಸಹಪ್ರಯಾಣಿಕ ಕುಳಿತಲ್ಲಿನಿಂದಲೇ ಗೊಟಕ್ ಅಂದಿದ್ದಾನೆ.. ಮನೆಯ ತಲುಪುವ ಬದಲು ಪರಂಧಾಮವ ತಲುಪಿದ್ದಾನೆ.ಇಲ್ಲಿನ ೧೪ ತಾಸಿನ ಕೆಲಸವ ಬಿಟ್ಟು ಪರಲೋಕದ ಮೆಗಾ ಕಛೇರಿಯಲ್ಲಿ ಸಾಮಾನ್ಯವಾಗಿ ೨೦ ತಾಸಿನ ದುಡಿಮೆಗೆ ಹೊಂದಿಕೊಳ್ಳಬೇಕು ಆತ. ರೈಲಿನ ತೂಕಡಿಕೆ ನಿದ್ದೆಯಲ್ಲಿ ತಿಳಿಯದೆ ಆತ ಖಾಯಂ ನಿದ್ದೆಗೆ ಜಾರಿದ್ದು ನಿಜಕ್ಕೂ ವಿಷಾದನೀಯ.
ಈ ಆರು ಮಹಾನುಭಾವರಲ್ಲಿ ಯಾರು ಕುಳಿತಲ್ಲಿಯೇ ಕೊಳೆಯುತ್ತಿದ್ದಾರೆ ಅಂಥ ಹೇಳ್ತಿರಾ ?
2 comments:
ಎಲ್ಲರೂ ಸುಖ ನಿದ್ರೆಯಲ್ಲಿದ್ದಂತೆ ಕಾಣ್ತಾ ಇದೆ.
ಚಿರನಿದ್ರೆಯಲ್ಲಿರುವವರು ಯಾರು ಅಂತ ಗೊತ್ತಾಗ್ತಿಲ್ಲ!!!
Photo ತುಂಬಾ ಚೆನ್ನಾಗಿದೆ.
ಗೊರಕೆ ಹೊಡೆಯುವುದು ಉಂಟು ಕೆಲವರು !
Post a Comment