28 May 2007

ಹರಟೆ-1

" ಮಗುವಿನ ಕಣ್ಣು ಅಮ್ಮನ ಕಣ್ಣಿನ ಹಾಗೆ ಇದೆ ".
ಈ ಮಾತನ್ನು ಕೇಳಿದಾಗ ನಾನು ನೆನಪು ಮಾಡಿಕೊಳ್ಳುವುದು 5 ಅಪ್ಪ,ಅಮ್ಮ ಇರುವ ಆ ಮಗುವಿನ ಬಗ್ಗೆ ..ವೀರ್ಯ ಕೊಟ್ಟ ಅನಾಮಧೇಯ ಅಪ್ಪ , ಅಂಡಾಣು ಕೊಟ್ಟ ಅನಾಮಧೇಯ ಅಮ್ಮ , ಈ ವೀರ್ಯ ಹಾಗೂ ಅಂಡಾಣು ಹೊತ್ತು 9 ತಿಂಗಳ ತಿರುಗುವ ಬಾಡಿಗೆ ಅಮ್ಮ ( Surrogate Mother ) . ಇವರೆಲ್ಲಾ ಜೈವಿಕ ತಂದೆ - ತಾಯಿಗಳಾದರೆ , ಈ ಮಗುವನ್ನು ಸಾಕುವ ಪೂರ್ತಿ ಜವಾಬ್ದಾರಿ ಹೊತ್ತ ಸಾಕು ಅಪ್ಪ-ಅಮ್ಮಗಳ ಜೋಡಿ . ( Adopted parents ) .
ಈಗ ಹೇಳಿ 5 ಅಪ್ಪ, ಅಮ್ಮ ಇರುವ ಆ ಮಗುವನ್ನು ನೋಡಿದರೆ ಏನು ಹೇಳುವುದು ?

ನಿರ್ಜನ ಪ್ರದೇಶ ಹೇಗಿರುತ್ತದೆ ಎಂದು ಯಾರಿಗೂ ಹೇಳಲು ಸಾಧ್ಯವಿಲ್ಲಾ.
( ಯಾರಾದರೂ ನಿರ್ಜನ ಪ್ರದೇಶದಲ್ಲಿ ಇದ್ದಾರೆ ಎಂದರೆ ಅದು ಜನರಿಲ್ಲದ ಪ್ರದೇಶವಾಗುವುದಿಲ್ಲವಲ್ಲಾ ! )

ಜಾಲಪಂಚಾಂಗ - Blog ( Web-Log )
ಜಾಲಪಂಚಾಂಗಿ - Blogger
ಅಥವಾ
ಜಾಲಚರಿ ( ಜಾಲ-(ದಿನ)- ಚರಿ ) - Blog
ಜಾಲಚರಿಗಳು - Blogger
ಯಾವುದು ಚೆನ್ನಾಗಿದೆ ಅಂಥ ನೀವೇ ಹೇಳಿ ?

ಸ್ಮಶಾನ : ಸತ್ತವರು ತಮ್ಮ ( ಜೀವಿತ(?)) ಉಳಿದ ಅವಧಿಯನ್ನು ಕಳೆಯುವ ಜಾಗ.

ಎಲ್ಲರೂ ಒಂದು Catch Phrase ಇಟ್ಟು ಕೊಳ್ಳಬೇಕು ಎನ್ನುವವ ನಾನು.'ಸುಖಾ'ಊರಿನಲ್ಲಿದ್ದಾಗ ನಾನು ಖಾಯಂ ಉಪಯೋಗಿಸುವ Catch Phrase ಆಗಿತ್ತು. ಆ ಶಬ್ದವನ್ನು ರಾಗಬದ್ದವಾಗಿ ಎಳೆದು ಹೇಳಿದಾಗ ಸಿಗುವ ಸುಖವೇ ಬೇರೆ ! ಆ ಶಬ್ದವನ್ನು ಉಚ್ಚರಿಸಿಯೇ ಅನುಭವಿಸಬೇಕು - ಸುಖಾ ( Real Comfort).ನಂತರದ ದಿನಗಳಲ್ಲಿ ತಗಲಿಸಿಕೊಂಡಿದ್ದು ' ನಾಯಿ ಜನ್ಮ '. ಎಲ್ಲ ಬದಿಯಿಂದಲೂ ಕಷ್ಟಗಳು ಬಂದು ವಕ್ಕರಿಸಿದಾಗ ನಗು ನಗುತ್ತಲೇ ಹೇಳಬೇಹುದಾದ ಹಾಗೂ Reality ಯನ್ನು Realistic ಆಗಿ ನೋಡುವ ಒಳಕಣ್ಣು ನೀಡಿದ್ದು ಈ Catch Phrase. ನಿಮ್ಮ ಸ್ಥಿತಿಯ ಬಗ್ಗೆ ನೀವೇ ನಗಬಹುದಾದಾಗ ಹೊಸದಾದ ದಾರಿ , ಉತ್ತರ ಸಿಗುವುದು ಖಂಡಿತ ! Its having a whole new outlook and approach to the situation you are right now in.

25 May 2007

ಹರಟೆ

ದೇವರು ಪರಿಪೂರ್ಣ ಕಲೆಗಾರ -Artist.
ಆದರೆ, ಆತ ಪರಿಪೂರ್ಣತಾವಾದಿಯಲ್ಲ.ಕಾರಣ ನನ್ನ ಇರುವಿಕೆ !

ದಿನವೂ ಏನಾದರೂ ಹೊಸದನ್ನು ಕಲಿಯುವ ಬಯಕೆ ! ದಿನವೂ ಏನಾದರೂ ನಾನು ಹೊಸದನ್ನು ಕಲಿಯುತ್ತಿದ್ದೆನೆ.ಆದರೆ ನಿಜಕ್ಕೂ ನಾನು ಕಲಿಯುತ್ತಿರುವುದು ಹಳೆಯ ವಿಚಾರಗಳನ್ನು ! ಕಾರಣ ನಾನು ಕಲಿಯುತ್ತಿರುವ ವಿಚಾರ ಬೇರೆ ಯಾರಿಗೋ ತಿಳಿದ ವಿಚಾರ ತಾನೇ... ಇದಕ್ಕೆ ಸೂಕ್ತ ಉದಾಹರಣೆ : ಕೊಲಂಬಸ್ಸ .

ಎಸ್ಸ್.ಎಮ್ಮ್.ಎಸ್ಸ ನ್ನು ಕನ್ನಡಿಕರಿಸಿದ್ದಾಗ ದೊರೆತಿದ್ದು 'ಸಮೋಸ'.
ಇದು ಸರಳ ಮೊಬೈಲ್ ಸಂದೇಶ ಎಂಬುದರ ಮೊಟಕುಗೊಳಿಸಿ ಸ್ವಲ್ಪ ಬದಲಾವಣೆ ಮಾಡಿದ ರೂಪ.
(ಗೆಳೆಯ ರೋಹಿತ ಕಳಿಸಿದ್ದು )
ಎರವಲು ಪಡೆದಿದ್ದು !

ಜೀವನ ಸಣ್ಣದು ..ಕ್ಷಮಿಸಿ. ಜೀವನ ಸಣ್ಣದಲ್ಲಾ. ನಾವು ಸದಾ ನೋಡುವ ಗುಡ್ಡ,ಬೆಟ್ಟ,ನದಿ,ನಕ್ಷತ್ರ,ಗ್ರಹ ಎಲ್ಲವೂ ನಮ್ಮ ಜೀವಿತಾವಧಿಗಿಂತ ಜಾಸ್ತಿ ದಿನ ಇರುವ ಕಾರಣ ನಮ್ಮ ಬದುಕು ಸಣ್ಣದಾಗಿ ಕಾಣುವುದು. ಬದುಕಿನ ಅವಧಿ ಯಾವತ್ತು ಸರಿಯಾಗಿಯೇ ಇರುವುದು. ನಮ್ಮ ಸಾವಿನ ತನಕ.ನಿಜಕ್ಕೂ ಸಾವಿನ ಅವಧಿ ಸಣ್ಣದು. ( ಇಲ್ಲಿ ದಿನವೂ ಸಾವಿನ ಬಗ್ಗೆ ಆಲೋಚಿಸುತ್ತಾ ಹೆದರಿಕೆಯಿಂದ ದಿನ ಸಾಯುವವರ ಬಗ್ಗೆ ಪ್ರಸ್ಥಾವನೆ ಇಲ್ಲಾ ! )

ಹೆಣ್ಣು ಜೀವ ಇರುವ ಮನೆಯಲ್ಲಿ ನೀವು ನಿದ್ದೆ ಬಂದು ಮಲಗಿದಿರೆಂದರೇ , ನಿಮಗೆ ಎಚ್ಚರವಾದಾಗ ನಿಮ್ಮ ಮೈ ಮೇಲೆ ಹೊದಿಕೆ, ಬೆಡ್ ಶೀಟ ಇರುವುದು. ( ಬೇಸಿಗೆ ಕಾಲ ಇಲ್ಲದೆ ಇದ್ದಲ್ಲಿ . ಒಂದು ವೇಳೆ ಬೇಸಿಗೆ ಕಾಲವಿದ್ದಲ್ಲಿ ಫ್ಯಾನಿನ ಗಾಳಿ ಸ್ವಾಗತಿಸುವುದು )

ಸಮಸ್ಯೆಗೆ ನಿಮ್ಮಲ್ಲಿ ಪರಿಹಾರ ಇದೆ ಎಂದಾದರೆ , ನೀವೂ ಸಹ ಸಮಸ್ಯೆಯ ಒಂದು ಭಾಗವೇ !

Last but Not Least :
Cloud9 gets all the publicity but cloud 8 is cheeper , less crowded , and has a better view too !
ಎರವಲು ಪಡೆದಿದ್ದು !

21 May 2007

ಕವನ ಪ್ರಸಂಗ-2



ನೂರು ನೆನಪುಗಳ ಆಗರ
ಈ ಕಂಗಳ ನೋಟ
ದೀಪದ ಸುತ್ತ-ಮುತ್ತ
ಬೆಳಕು-ಕತ್ತಲೆಯ ಮೈತ್ರಿ ಕೂಟ

ಕಂಡರೂ ಕಾಣದ
ನೋಡಿದರೂ ಹೇಳಲಾಗದ
ಅಪರೂಪದ ಸ್ಥಿತಿ
ಇರಲು ಈ ಸುಂದರ ಚಿತ್ರ
ಶಬ್ದಸಾಗರದಿ ತಿಳಿಯಾಗಬಹುದೇ
ಎನ್ನುವ ಭೀತಿ

ನೂತನ-ಚಿರನೂತನ
ಪ್ರತಿಯೊಂದು ನೋಟ
ಬಣ್ಣದ ಚಿತ್ತಾರಕ್ಕೆ
ಶಬ್ದದೀ ಹೊಸ ಮೈಮಾಟ!


15 May 2007

ಕವನ ಪ್ರಸಂಗ

ಕಲೆ

ಗಂಡನಿಗೆ ಗೊತ್ತು
ಬ್ಯಾಂಕಿನಿಂದ
cheque - ಕ್ಯಾಶ್ ಮಾಡುವ ಕಲೆ,

ಹೆಂಡತಿಗೆ ಗೊತ್ತು
ಪತಿ ದೇವರ
ಜೇಬೆಂಬ ಹುಂಡಿಯಲ್ಲಿನ
Cash- ಚೆಕ್ ಮಾಡುವ ಕಲೆ !

ಅಮಲು

ಮುಂಜಾವಿನಿಂದ
ಸಂಜೆಯ ತನಕ -
ಕುಡಿತ ವಿರೋಧಿ ಮಾತು
ಅನೇಕರಿಗೆ ಕರ-ತಲಾ-ಮಲ-ಕ...

ಗೋಧೂಳಿ ಸಮಯದೊಂದಿಗೆ
ದೂಳು-ತಿನ್ನುತ ರಸ್ತೆ ಬದಿಯಲಿ
ಬರಿ-'ತಲೆ'-'ಅಮಲು'-(ಹಿಕ್,ಹಿಕ್)-ಕ

-ವೈ.ಎನ್.ಕೆ. ಯವರ ಹುಟ್ಟಿದ ಹಬ್ಬ ( ಮೇ 16) .
ಅವರ ನೆನಪಿಗೆ.

14 May 2007

ನಿದ್ದೆ


ನಿದ್ದೆಯಲ್ಲಿ ಹಾಗೂ ಸಾವಿನಲ್ಲಿ ವ್ಯತ್ಯಾಸವಿಲ್ಲ !
ಎರಡರಲ್ಲಿಯೂ ಮನುಷ್ಯ ಹಸುಗೂಸಿನ ತರಹ ನಿರ್ಮಲ ಚಿತ್ತನಾಗಿರುತ್ತಾನೆ.
ಪ್ರತಿಯೊಬ್ಬನಲ್ಲಿಯೂ ಮಗುವಿನ ಮನಸ್ಸಿದೆ ಎನ್ನುವುದು ಸತ್ಯ ತಾನೇ !
ಯಾವುದೆ ಚಿಂತೆ, ಸಿಟ್ಟು , ದ್ವೇಷ , ಅಸೂಯೆ , ಇನ್ನಾವುದೇ ಕಿರಿ-ಕಿರಿ ಇಲ್ಲದ ಸಮಯ ಈ ನಿದ್ದೆ ಹಾಗೂ ಸಾವು.
ದಿನವೂ ನಾವು ಮಗು ಆಗುತ್ತೇವೆ, ನಮಗೆ ಅರಿವಿಲ್ಲದಂತೆ.

11 May 2007

ಹಿಬಿಯಾ ಉದ್ಯಾನವನ

ಸುಮಾರು 4-5 ಎಕರೆ ಜಾಗದಲ್ಲಿ ನಳನಳಿಸುತ್ತಿರುವ ಈ ಉದ್ಯಾನವನ ಟೊಕಿಯೊ ಕಾಂಕ್ರೀಟ ಮಹಾನಗರಕ್ಕೆ ಒಂದು ಶೋಭೆಯೇ ! ನಾನು ಕೆಲಸ ಮಾಡುವ ಆಫೀಸಿನ ಎದುರು ಈ ಉದ್ಯಾನವನ ಇದೆ. ವಸಂತ ಋತುವಿನಾಗಮನದಿಂದ ಹಸಿರಿನ ವಿವಿಧ shades ನಲ್ಲಿ ಕಂಗೊಳಿಸುತ್ತಿರುವ ಗಿಡ, ಮರಗಳನ್ನು ನೋಡುವುದೇ ಒಂದು ಚಂದ.ಇಂದು ಊಟಕ್ಕೆ ಇಂಡಿಯನ್ ರೆಸ್ಟಾರಂಟಗೆ ಹೋಗಿದ್ದೆ. ಊಟಕ್ಕೆ 620 ಯೆನ್ನ್ ಕೋಡುವುದು ಈಗ ಜಾಸ್ತಿ ಅನ್ನಿಸುವುದಿಲ್ಲಾ. (ಸರಿ ಸುಮಾರು ಭಾರತೀಯ 211 ರೂಪಾಯಿ ).ಬರುವಾಗ ಬೇರೆ ದಾರಿ ಇದ್ದರೂ ಈ ಉದ್ಯಾನವನದಲ್ಲಿ ಬರುವುದು ಕಾಡು, ಬೆಟ್ಟ, ಗುಡ್ಡ ತಿರುಗುವುದರಲ್ಲಿ ಸುಖ ಕಂಡ ನನಗೆ ಒಂದು ರೀತಿಯ ಮುದ ನೀಡುವುದಂತೂ ಗ್ಯಾರಂಟಿ ! ಬರುವಾಗ ಅಲ್ಲಿ ಕಂಡ ಪಾರ್ಕನ ಮ್ಯಾಪಿನ್ನು ನೋಡಿದಾಗ ಅದರ ಮೇಲೆ ಕೈ ಆಡಿಸ ಬೇಕಂತ ಅನ್ನಿಸಿತು. ಕಾರಣ ಆ ಮ್ಯಾಪ ಅಂಧರಿಗಾಗಿಯೂ ಇದ್ದಿರುವುದು.ಆ ಮ್ಯಾಪಿನ ಮೇಲ್ಮೈ ಉಬ್ಬು,ತಗ್ಗಿನ ಬ್ರೈಲ್ ಲಿಪಿ ಸಹ ಕಂಡು ಇಲ್ಲಿನ ಜನರ ಆಲೋಚನಾ ಶೈಲಿಯ ಬಗ್ಗೆ ಶಹಭಾಶ ಎನ್ನಿಸಿತು.

07 May 2007

ಅಲಾರಾಮ್ !

ದಿನವೂ ಅಲಾರಾಮ್ ಬಡಿದೇಳಿಸಲು
ಕರಾರುವಕ್ಕಾಗಿ ಇಡುವ ಸಮಯ 6.00 ಗಂಟೆ.
ನಾನು ಅಲಾರಾಮ್ ನ ತಲೆಗೆ ಬಡಿದು ಮಲಗಿಸುವ ಸಮಯ 5.55 !

ಹಿಂದೊಮ್ಮೆ ಅಲಾರಾಮನ ಬಗ್ಗೆ ಬರೆದಿದ್ದೆ ನಾನು..
' ನನಗೆ ಬೇಡ ಅಲಾರಾಮ್ ..
ದಿನ ಮುಂಜಾನೆ ಇರಲು ಎರಡು ಅಲಾರಾಮ್ !
ಒಂದು ಬಾರಿ - ಖಾಜಿ ಕೂಗಲು 'ಅಲ್ಲಾ...'
ಮಗದೊಮ್ಮೆ -ದೇವಸ್ಥಾನದಿಂದ ಕೇಳಿಬರಲು 'ರಾಮ್'.

ನನಗೆ ಬೇಡ ನಿಜಕ್ಕೂ ಅಲಾರಾಮ್..
ಕಾರಣ ಅಲಾರಾಮ್ ಸರಿಯಾಗಿ ನಡೆಯುತ್ತಿದೆಯೋ ಇಲ್ಲವೋ
ಎಂದು ಪರೀಕ್ಷೆ ಮಾಡಲು ಕನಿಷ್ಟ 4-5 ಬಾರಿ ಆದರೂ ನಾನು
ಎದ್ದಿರುತ್ತೆನೆ.ಅಲಾರಾಮ್ ಬೆಚ್ಚಗೆ ಮಲಗಿರುತ್ತದೆ !

02 May 2007

Book Review


I am presently reading a book by Hirotada Ototake. The language is simple and touching. Its memoirs of a physically challenged person who was born with 'tetra-amelia' a cogenital condition in which the person is almost left with no arms and no legs.A touching story of a person from his birth to present day. His transformation , his emotions, his never say die personality all are captured in this nice book which can be read in a single stretch.
Worth reading.
He reminds :
  • Its go-getters world.
  • Its your outlook to life that matters.
  • Where never is heard , A discouraging word , And the skies are not cloudy all day.

He says :

"I don't suppose a disability is actually an asset in too many people's eyes, but don't let that stop you. In the end, it all comes down to what you, as a person, have to offer."