ಹರಟೆ
ದೇವರು ಪರಿಪೂರ್ಣ ಕಲೆಗಾರ -Artist.
ಆದರೆ, ಆತ ಪರಿಪೂರ್ಣತಾವಾದಿಯಲ್ಲ.ಕಾರಣ ನನ್ನ ಇರುವಿಕೆ !
ದಿನವೂ ಏನಾದರೂ ಹೊಸದನ್ನು ಕಲಿಯುವ ಬಯಕೆ ! ದಿನವೂ ಏನಾದರೂ ನಾನು ಹೊಸದನ್ನು ಕಲಿಯುತ್ತಿದ್ದೆನೆ.ಆದರೆ ನಿಜಕ್ಕೂ ನಾನು ಕಲಿಯುತ್ತಿರುವುದು ಹಳೆಯ ವಿಚಾರಗಳನ್ನು ! ಕಾರಣ ನಾನು ಕಲಿಯುತ್ತಿರುವ ವಿಚಾರ ಬೇರೆ ಯಾರಿಗೋ ತಿಳಿದ ವಿಚಾರ ತಾನೇ... ಇದಕ್ಕೆ ಸೂಕ್ತ ಉದಾಹರಣೆ : ಕೊಲಂಬಸ್ಸ .
ಎಸ್ಸ್.ಎಮ್ಮ್.ಎಸ್ಸ ನ್ನು ಕನ್ನಡಿಕರಿಸಿದ್ದಾಗ ದೊರೆತಿದ್ದು 'ಸಮೋಸ'.
ಇದು ಸರಳ ಮೊಬೈಲ್ ಸಂದೇಶ ಎಂಬುದರ ಮೊಟಕುಗೊಳಿಸಿ ಸ್ವಲ್ಪ ಬದಲಾವಣೆ ಮಾಡಿದ ರೂಪ.
(ಗೆಳೆಯ ರೋಹಿತ ಕಳಿಸಿದ್ದು )
ಎರವಲು ಪಡೆದಿದ್ದು !
ಜೀವನ ಸಣ್ಣದು ..ಕ್ಷಮಿಸಿ. ಜೀವನ ಸಣ್ಣದಲ್ಲಾ. ನಾವು ಸದಾ ನೋಡುವ ಗುಡ್ಡ,ಬೆಟ್ಟ,ನದಿ,ನಕ್ಷತ್ರ,ಗ್ರಹ ಎಲ್ಲವೂ ನಮ್ಮ ಜೀವಿತಾವಧಿಗಿಂತ ಜಾಸ್ತಿ ದಿನ ಇರುವ ಕಾರಣ ನಮ್ಮ ಬದುಕು ಸಣ್ಣದಾಗಿ ಕಾಣುವುದು. ಬದುಕಿನ ಅವಧಿ ಯಾವತ್ತು ಸರಿಯಾಗಿಯೇ ಇರುವುದು. ನಮ್ಮ ಸಾವಿನ ತನಕ.ನಿಜಕ್ಕೂ ಸಾವಿನ ಅವಧಿ ಸಣ್ಣದು. ( ಇಲ್ಲಿ ದಿನವೂ ಸಾವಿನ ಬಗ್ಗೆ ಆಲೋಚಿಸುತ್ತಾ ಹೆದರಿಕೆಯಿಂದ ದಿನ ಸಾಯುವವರ ಬಗ್ಗೆ ಪ್ರಸ್ಥಾವನೆ ಇಲ್ಲಾ ! )
ಹೆಣ್ಣು ಜೀವ ಇರುವ ಮನೆಯಲ್ಲಿ ನೀವು ನಿದ್ದೆ ಬಂದು ಮಲಗಿದಿರೆಂದರೇ , ನಿಮಗೆ ಎಚ್ಚರವಾದಾಗ ನಿಮ್ಮ ಮೈ ಮೇಲೆ ಹೊದಿಕೆ, ಬೆಡ್ ಶೀಟ ಇರುವುದು. ( ಬೇಸಿಗೆ ಕಾಲ ಇಲ್ಲದೆ ಇದ್ದಲ್ಲಿ . ಒಂದು ವೇಳೆ ಬೇಸಿಗೆ ಕಾಲವಿದ್ದಲ್ಲಿ ಫ್ಯಾನಿನ ಗಾಳಿ ಸ್ವಾಗತಿಸುವುದು )
ಸಮಸ್ಯೆಗೆ ನಿಮ್ಮಲ್ಲಿ ಪರಿಹಾರ ಇದೆ ಎಂದಾದರೆ , ನೀವೂ ಸಹ ಸಮಸ್ಯೆಯ ಒಂದು ಭಾಗವೇ !
Last but Not Least :
Cloud9 gets all the publicity but cloud 8 is cheeper , less crowded , and has a better view too !
ಎರವಲು ಪಡೆದಿದ್ದು !
5 comments:
Rajeev....it's coming very nicely.
Let same be continued. All the best!
ನಮಸ್ಕಾರ,
ನಿಮ್ಮ ಬ್ಲಾಗಿಗೆ ಮೊದಲ ಭೇಟಿ.
ಎಲ್ಲಾ ಹನಿಗಳು(ತುಣುಕುಗಳು) ಚೆನ್ನಾಗಿವೆ.
ನಂಗೆ ತುಂಬಾ ಇಷ್ಟ ಆಗಿದ್ದು ಇದು "ದೇವರು ಪರಿಪೂರ್ಣ ಕಲೆಗಾರ -Artist.
ಆದರೆ, ಆತ ಪರಿಪೂರ್ಣತಾವಾದಿಯಲ್ಲ.ಕಾರಣ ನನ್ನ ಇರುವಿಕೆ ! "
ಸಿರ್ಸಿಯವರಾ? ಸಿರ್ಸಿಯಲ್ಲಿ ಎಲ್ಲಿ?
ಧನ್ಯವಾದಗಳು ಮನಸ್ವಿನಿ.
ತಾವೂ ಸಹ ಸಿರ್ಸಿಯವರು ಎಂದು ತಿಳಿಯಿತು.
ನಿಮ್ಮ ಜಾಲಪಂಚಾಂಗ (Blog)ನೋಡಿ ಖುಷಿಯಾಯಿತು.
"ನಾವು ಸದಾ ನೋಡುವ ಗುಡ್ಡ,ಬೆಟ್ಟ,ನದಿ,ನಕ್ಷತ್ರ,ಗ್ರಹ ಎಲ್ಲವೂ ನಮ್ಮ ಜೀವಿತಾವಧಿಗಿಂತ ಜಾಸ್ತಿ ದಿನ ಇರುವ ಕಾರಣ ನಮ್ಮ ಬದುಕು ಸಣ್ಣದಾಗಿ ಕಾಣುವುದು. " ತುಂಬಾ ಇಷ್ಟ ಆಯ್ತು.
ಇದು ಸತ್ಯ ಆದ್ರೂ ಜನ ಹೇಳೋದು ಜೀವನ ಸಣ್ಣದು ಅಂತನೇ..
ಏಷ್ಟೋ ಜನರಿಗೆ ಜೀವನ ಅಂದ್ರೆ ಏನು ಅನ್ನೋ ಹೊತ್ತಿಗೆ ಮೇಲೆ ಹೋಗೋಕೆ ರೆಡಿಯಾಗಿರ್ತಾರೆ.
ನಿಮ್ಮ ಬ್ಲಾಗ್ ಚಿಂತನೆಗೆ ಹಚ್ಚುತ್ತೆ.ಚಿಕ್ಕದಾಗಿ ಚೊಕ್ಕದಾಗಿ ಬರೆದಿದ್ದೀರ
Post a Comment