21 May 2007

ಕವನ ಪ್ರಸಂಗ-2



ನೂರು ನೆನಪುಗಳ ಆಗರ
ಈ ಕಂಗಳ ನೋಟ
ದೀಪದ ಸುತ್ತ-ಮುತ್ತ
ಬೆಳಕು-ಕತ್ತಲೆಯ ಮೈತ್ರಿ ಕೂಟ

ಕಂಡರೂ ಕಾಣದ
ನೋಡಿದರೂ ಹೇಳಲಾಗದ
ಅಪರೂಪದ ಸ್ಥಿತಿ
ಇರಲು ಈ ಸುಂದರ ಚಿತ್ರ
ಶಬ್ದಸಾಗರದಿ ತಿಳಿಯಾಗಬಹುದೇ
ಎನ್ನುವ ಭೀತಿ

ನೂತನ-ಚಿರನೂತನ
ಪ್ರತಿಯೊಂದು ನೋಟ
ಬಣ್ಣದ ಚಿತ್ತಾರಕ್ಕೆ
ಶಬ್ದದೀ ಹೊಸ ಮೈಮಾಟ!


15 May 2007

ಕವನ ಪ್ರಸಂಗ

ಕಲೆ

ಗಂಡನಿಗೆ ಗೊತ್ತು
ಬ್ಯಾಂಕಿನಿಂದ
cheque - ಕ್ಯಾಶ್ ಮಾಡುವ ಕಲೆ,

ಹೆಂಡತಿಗೆ ಗೊತ್ತು
ಪತಿ ದೇವರ
ಜೇಬೆಂಬ ಹುಂಡಿಯಲ್ಲಿನ
Cash- ಚೆಕ್ ಮಾಡುವ ಕಲೆ !

ಅಮಲು

ಮುಂಜಾವಿನಿಂದ
ಸಂಜೆಯ ತನಕ -
ಕುಡಿತ ವಿರೋಧಿ ಮಾತು
ಅನೇಕರಿಗೆ ಕರ-ತಲಾ-ಮಲ-ಕ...

ಗೋಧೂಳಿ ಸಮಯದೊಂದಿಗೆ
ದೂಳು-ತಿನ್ನುತ ರಸ್ತೆ ಬದಿಯಲಿ
ಬರಿ-'ತಲೆ'-'ಅಮಲು'-(ಹಿಕ್,ಹಿಕ್)-ಕ

-ವೈ.ಎನ್.ಕೆ. ಯವರ ಹುಟ್ಟಿದ ಹಬ್ಬ ( ಮೇ 16) .
ಅವರ ನೆನಪಿಗೆ.

14 May 2007

ನಿದ್ದೆ


ನಿದ್ದೆಯಲ್ಲಿ ಹಾಗೂ ಸಾವಿನಲ್ಲಿ ವ್ಯತ್ಯಾಸವಿಲ್ಲ !
ಎರಡರಲ್ಲಿಯೂ ಮನುಷ್ಯ ಹಸುಗೂಸಿನ ತರಹ ನಿರ್ಮಲ ಚಿತ್ತನಾಗಿರುತ್ತಾನೆ.
ಪ್ರತಿಯೊಬ್ಬನಲ್ಲಿಯೂ ಮಗುವಿನ ಮನಸ್ಸಿದೆ ಎನ್ನುವುದು ಸತ್ಯ ತಾನೇ !
ಯಾವುದೆ ಚಿಂತೆ, ಸಿಟ್ಟು , ದ್ವೇಷ , ಅಸೂಯೆ , ಇನ್ನಾವುದೇ ಕಿರಿ-ಕಿರಿ ಇಲ್ಲದ ಸಮಯ ಈ ನಿದ್ದೆ ಹಾಗೂ ಸಾವು.
ದಿನವೂ ನಾವು ಮಗು ಆಗುತ್ತೇವೆ, ನಮಗೆ ಅರಿವಿಲ್ಲದಂತೆ.

11 May 2007

ಹಿಬಿಯಾ ಉದ್ಯಾನವನ

ಸುಮಾರು 4-5 ಎಕರೆ ಜಾಗದಲ್ಲಿ ನಳನಳಿಸುತ್ತಿರುವ ಈ ಉದ್ಯಾನವನ ಟೊಕಿಯೊ ಕಾಂಕ್ರೀಟ ಮಹಾನಗರಕ್ಕೆ ಒಂದು ಶೋಭೆಯೇ ! ನಾನು ಕೆಲಸ ಮಾಡುವ ಆಫೀಸಿನ ಎದುರು ಈ ಉದ್ಯಾನವನ ಇದೆ. ವಸಂತ ಋತುವಿನಾಗಮನದಿಂದ ಹಸಿರಿನ ವಿವಿಧ shades ನಲ್ಲಿ ಕಂಗೊಳಿಸುತ್ತಿರುವ ಗಿಡ, ಮರಗಳನ್ನು ನೋಡುವುದೇ ಒಂದು ಚಂದ.ಇಂದು ಊಟಕ್ಕೆ ಇಂಡಿಯನ್ ರೆಸ್ಟಾರಂಟಗೆ ಹೋಗಿದ್ದೆ. ಊಟಕ್ಕೆ 620 ಯೆನ್ನ್ ಕೋಡುವುದು ಈಗ ಜಾಸ್ತಿ ಅನ್ನಿಸುವುದಿಲ್ಲಾ. (ಸರಿ ಸುಮಾರು ಭಾರತೀಯ 211 ರೂಪಾಯಿ ).ಬರುವಾಗ ಬೇರೆ ದಾರಿ ಇದ್ದರೂ ಈ ಉದ್ಯಾನವನದಲ್ಲಿ ಬರುವುದು ಕಾಡು, ಬೆಟ್ಟ, ಗುಡ್ಡ ತಿರುಗುವುದರಲ್ಲಿ ಸುಖ ಕಂಡ ನನಗೆ ಒಂದು ರೀತಿಯ ಮುದ ನೀಡುವುದಂತೂ ಗ್ಯಾರಂಟಿ ! ಬರುವಾಗ ಅಲ್ಲಿ ಕಂಡ ಪಾರ್ಕನ ಮ್ಯಾಪಿನ್ನು ನೋಡಿದಾಗ ಅದರ ಮೇಲೆ ಕೈ ಆಡಿಸ ಬೇಕಂತ ಅನ್ನಿಸಿತು. ಕಾರಣ ಆ ಮ್ಯಾಪ ಅಂಧರಿಗಾಗಿಯೂ ಇದ್ದಿರುವುದು.ಆ ಮ್ಯಾಪಿನ ಮೇಲ್ಮೈ ಉಬ್ಬು,ತಗ್ಗಿನ ಬ್ರೈಲ್ ಲಿಪಿ ಸಹ ಕಂಡು ಇಲ್ಲಿನ ಜನರ ಆಲೋಚನಾ ಶೈಲಿಯ ಬಗ್ಗೆ ಶಹಭಾಶ ಎನ್ನಿಸಿತು.

07 May 2007

ಅಲಾರಾಮ್ !

ದಿನವೂ ಅಲಾರಾಮ್ ಬಡಿದೇಳಿಸಲು
ಕರಾರುವಕ್ಕಾಗಿ ಇಡುವ ಸಮಯ 6.00 ಗಂಟೆ.
ನಾನು ಅಲಾರಾಮ್ ನ ತಲೆಗೆ ಬಡಿದು ಮಲಗಿಸುವ ಸಮಯ 5.55 !

ಹಿಂದೊಮ್ಮೆ ಅಲಾರಾಮನ ಬಗ್ಗೆ ಬರೆದಿದ್ದೆ ನಾನು..
' ನನಗೆ ಬೇಡ ಅಲಾರಾಮ್ ..
ದಿನ ಮುಂಜಾನೆ ಇರಲು ಎರಡು ಅಲಾರಾಮ್ !
ಒಂದು ಬಾರಿ - ಖಾಜಿ ಕೂಗಲು 'ಅಲ್ಲಾ...'
ಮಗದೊಮ್ಮೆ -ದೇವಸ್ಥಾನದಿಂದ ಕೇಳಿಬರಲು 'ರಾಮ್'.

ನನಗೆ ಬೇಡ ನಿಜಕ್ಕೂ ಅಲಾರಾಮ್..
ಕಾರಣ ಅಲಾರಾಮ್ ಸರಿಯಾಗಿ ನಡೆಯುತ್ತಿದೆಯೋ ಇಲ್ಲವೋ
ಎಂದು ಪರೀಕ್ಷೆ ಮಾಡಲು ಕನಿಷ್ಟ 4-5 ಬಾರಿ ಆದರೂ ನಾನು
ಎದ್ದಿರುತ್ತೆನೆ.ಅಲಾರಾಮ್ ಬೆಚ್ಚಗೆ ಮಲಗಿರುತ್ತದೆ !

02 May 2007

Book Review


I am presently reading a book by Hirotada Ototake. The language is simple and touching. Its memoirs of a physically challenged person who was born with 'tetra-amelia' a cogenital condition in which the person is almost left with no arms and no legs.A touching story of a person from his birth to present day. His transformation , his emotions, his never say die personality all are captured in this nice book which can be read in a single stretch.
Worth reading.
He reminds :
  • Its go-getters world.
  • Its your outlook to life that matters.
  • Where never is heard , A discouraging word , And the skies are not cloudy all day.

He says :

"I don't suppose a disability is actually an asset in too many people's eyes, but don't let that stop you. In the end, it all comes down to what you, as a person, have to offer."